ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಮಲಮ್ಮ ಅನಂತಕೃಷ್ಣ ವರ್ಣ ಪ್ರತಿಷ್ಠಾನ ಮಂಗಳೂರು ಮತ್ತು ಕುಂದಪ್ರಭ ಟ್ರಸ್ಟ್ ವತಿಯಿಂದ ಕೊಡಲಾಗುವ ಅಮ್ಮ ಕುಂದಗನ್ನಡ ಕಥಾ ಪ್ರಶಸ್ತಿಯನ್ನು ಯುವ ಕತೆಗಾರ ಮಂಜುನಾಥ ಹಿಲಿಯಾಣ ಅವರಿಗೆ ನೀಡಿ ಪುರಸ್ಕರಿಸಲಾಯಿತು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಣಿಪಾಲ್ ಅಕಾಡೆಮಿ ಆಡಳಿತಾಧಿಕಾರಿ ಡಾ. ಎಚ್ ಶಾಂತರಾಮ್, ವಿದ್ವಾಂಸರಾದ ಪ್ರೋ. ಎ. ವಿ. ನಾವುಡ, ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಲ್ವತ್ತು ವರ್ಷ ಮೀರದ ಯುವ ಕಥೆಗಾರರಗಾಗಿ ಈ ಸ್ಪರ್ಧೆ ನಡೆಸಲಾಗಿದ್ದು, ಮಂಜುನಾಥ ಹಿಲಿಯಾಣ ಅವರ ‘ಹೆತ್ತಬ್ಬಿ ಕಲ್ಸಿದ ಪಾಠ’ ಎಂಬ ಕುಂದಕನ್ನಡದ ಕಥೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಥೆಗೆ ಪ್ರಶಸ್ತಿ ಸಹಿತ 5 ಸಾವಿರ ರೂ. ನಗದು ಪುರಸ್ಕಾರ ನೀಡಲಾಗಿದೆ.