ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಎಂಬಲ್ಲಿ ನೀರಿನ ಟ್ಯಾಂಕಿಗೆ ಬಿದ್ದು ಮೃತಪಟ್ಟ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪುತ್ತೂರು ಕರಾವಳಿ ಕುಲಾಲ-ಕುಂಬಾರ ಯುವವೇದಿಕೆ ಮತ್ತು ಕುಂಬಾರರ ಗುಡಿ ಕೈಗಾರಿಕಾ ಸಹಾಕಾರಿ ಸಂಘದ ವತಿಯಿಂದ 46 ಸಾವಿರ ರೂಪಾಯಿ ನೆರವು ನೀಡಲಾಯಿತು.
ಏಪ್ರಿಲ್ 6ರಂದು ಸಂತ್ರಸ್ತ ಕುಟುಂಬದ ಮನೆಗೆ ಭೇಟಿ ನೀಡಿದ ಸಂಘಟನೆಯ ಮುಖಂಡರು ನೆರವು ಹಸ್ತಾಂತರಿಸಿದರು. ಈ ಸಂದರ್ಭ ಕುಂಬಾರರ ಗುಡಿಕೈಗಾರಿಕ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಎಂ ಪೆರುವಾಯಿ, ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಜನಾರ್ಧನ್ ಸಾರ್ಯ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಪುತ್ತೂರು ತಾಲೂಕು ಅಧ್ಯಕ್ಷ ನವೀನ್ ಕುಲಾಲ್, ಸಹಕಾರಿ ಸಂಘದ ನಿರ್ದೇಶಕರಾದ ದಾಮೋದರ ಕುಲಾಲ್, ಕಾಂಟ್ರಾಕ್ಟರ್ ಆನಂದ್ ಪಡೀಲ್, ಸ್ಥಳೀಯರಾದ ರಮೇಶ್ ಉಡ್ಡಂಗಳ ಉಪಸ್ಥಿತರಿದ್ದರು.