ಮಂಗಳೂರು(ಏ.೦೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ.ಕ ಜಿಲ್ಲಾ ಕುಲಾಲರ ಯಾನೆ ಮೂಲ್ಯರ ಮಾತೃ ಸಂಘದ ಮಹಿಳಾ ಮಂಡಳಿಯ ನೂತನ ಸಾಲಿನ ಅಧ್ಯಕ್ಷರಾಗಿ ಚಂಚಲಾಕ್ಷಿ ಸುಕುಮಾರ್ ಕುಲಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಪ್ರಮೀಳಾ ಅನಿಲ್, ಕಾರ್ಯದರ್ಶಿಯಾಗಿ ರೇಣುಕಾ ಶ್ರೀನಿವಾಸ್, ಕೋಶಾಧಿಕಾರಿಯಾಗಿ ಜಯಶ್ರೀ ಚೇತನ್, ಸಂಘಟನಾ ಕಾರ್ಯದರ್ಶಿಯಾಗಿ ಜ್ಯೋತಿ ಜಯಾನಂದ ಅವರು ಆಯ್ಕೆಯಾಗಿದ್ದಾರೆ. ಇತರ ಇಪ್ಪತ್ತು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಸೇವಾ ದಳಪತಿಯಾಗಿ ಸಂದೇಶ್ ಕುಲಾಲ್ :
ಇದೇ ಸಂದರ್ಭ 2019-20ನೇ ಸಾಲಿಗೆ ಸೇವಾ ದಳಪತಿಯಾಗಿ ಸಂದೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಉಪದಳಪತಿಗಳಾಗಿ ಜಯಂತ್ ಕುಲಾಲ್, ಧನುಷ್ ರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಸಂಧ್ಯಾ ಕುಲಾಲ್, ಕೋಶಾಧಿಕಾರಿಯಾಗಿ ಶ್ರುತಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀವತ್ಸ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕ್ಷಮಾ ಕುಲಾಲ್, ಕ್ರೀಡಾ ಕಾರ್ಯದರ್ಶಿಯಾಗಿ ತೃಪ್ತಿ ಕುಲಾಲ್ ಹಾಗೂ ಇತರ 30 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.