ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಭಾರತ ಸರ್ಕಾರ ನೀತಿ ಆಯೋಗದಡಿ ಬರುವ ಬೆಂಗಳೂರಿನ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಆಂಡ್ ಎಜುಕೇಶನ್ ವತಿಯಿಂದ ಇಂಜಿನಿಯರ್ ಆನಂದ್ ಬಂಜನ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.
ಮಂಗಳೂರಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಆನಂದ್ ಅವರಿಗೆ ಮಾರ್ಚ್ 23 ರಂದು ಮುಂಬಯಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಬಂಟ್ವಾಳ ಕಳ್ಳಿಗೆ ನಿವಾಸಿಯಾದ ಅವರು ಇಂಜಿನಿಯರ್ಸ್ ಎಸೋಸಿಯೇಶನ್, ಜೂನಿಯರ್ ಛೇಂಬರ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು, “ಮತ್ತೆ ಹುಟ್ಟಿ ಬಾ ಸರ್ವಜ್ಞ” ಎಂಬ ಕೃತಿಯನ್ನು ಪ್ರಕಟಿಸಿದ್ದರು. ಸಮಾಜ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.