ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉಡುಪಿ ಜಿಲ್ಲೆ ಎರ್ಮಾಳು ಬಡಾ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು/ಸಾಹಿತಿ ಜ್ಯೋತಿ ಚೇಳ್ಯಾರು ಅವರ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಭಾಷಾ ನಿಕಾಯದ ಡೀನ್ ಆಗಿರುವ ಡಾ. ಎ. ಸುಬ್ಬಣ್ಣ ರೈಯವರ ಮಾರ್ಗದರ್ಶನದಲ್ಲಿ ಜ್ಯೋತಿ ಚೇಳ್ಯಾರು ಅವರು ಮಂಡಿಸಿದ `ಕರಾವಳಿ ಕರ್ನಾಟಕದಲ್ಲಿ ಕೃಷಿ ಸಂಸ್ಕೃತಿಯ ಪಲ್ಲಟ ಅದರ ಸಾಹಿತ್ಯಿಕ ಅಭಿವ್ಯಕ್ತಿ’ ಎಂಬ ಸಂಶೋಧನಾ ಪ್ರಬಂಧಕ್ಕೆ ಇತ್ತೀಚೆಗೆ ನಡೆದ ಹಂಪಿ ವಿವಿ 27ನೇ ನುಡಿ ಹಬ್ಬದಲ್ಲಿ ಪಿಎಚ್.ಡಿ. ಪ್ರಶಸ್ತಿ ಪ್ರದಾನ ಮಾಡಲಾಯಿತು.