ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ನಾಗೇಶ್ ಕುಲಾಲ್ ನೇತೃತ್ವದ `ಕುಳಾಯಿ ಕಲಾಕುಂಭ ಸಾಂಸ್ಕೃತಿಕ ವೇದಿಕೆ’ಯು ತಮ್ಮ ಅತ್ಯುತ್ತಮ ಸಂಘಟೆಗಾಗಿ `ಸ್ವಸ್ತಿ ಸಿರಿ’ ರಾಜ್ಯ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು.
ಕಳೆದ 33 ವರ್ಷಗಳಿಂದ ವಿವಿಧ ಸಾಮಾಜಿಕ ಆರೋಗ್ಯ ಸಾಂಸ್ಕೃತಿಕ ಕ್ರೀಡಾ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ನೀಡಲಾಗುವ ಈ ಪ್ರಶಸ್ತಿಯನ್ನು ಮಾರ್ಚ್ ನಾಲ್ಕರಂದು ಬಂಗ್ಲೆ ಮೈದಾನದಲ್ಲಿ ಕ್ಲಬ್ನ 35ನೇ ಸಂಭ್ರಮಾಚರಣೆಯ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರು ರಾಜೇಶ್ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಈ ಸಂದರ್ಭ ಉಪಸ್ಥಿತರಿದ್ದರು.
ತುಳುನಾಡ ಸಂಸ್ಕೃತಿ, ಆಚಾರ, ಕಲೆ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲಾಕುಂಭ ಸಾಂಸ್ಕೃತಿಕ ತಂಡದ ಅಧ್ಯಕ್ಷ ನಾಗೇಶ್ ಕುಲಾಲ್, ನಿರೂಪಕರು ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್, ಮೋಹನ್ ಐ ಮೂಲ್ಯ, ನಾರಾಯಣ್ ಪಿ ಹೊಸಬೆಟ್ಟು, ಉಮೇಶ್ ಬಾಳ, ಮನೋಜ್ ಕುಳಾಯಿ, ವಸಂತ್ ಪಡೀಲ್, ಸತೀಶ್ ತಡಂಬೈಲ್, ವಿಶ್ವನಾಥ ಸೂರಿಂಜೆ, ತಾರಾನಾಥ ಪಡೀಲ್, ಕಾರ್ತಿಕ್, ನಿತೇಶ್, ನೀಲೇಶ್, ಅಕ್ಷಯ್, ಪ್ರೇಮ ನಾರಾಯಣ್, ಪ್ರಮೀಳಾ ಉಮೇಶ್, ತುಳಸಿ, ಪಲ್ಲವಿ, ಯಶಸ್ವಿ, ಶಿಭಾ, ದೀಕ್ಷಾ, ತಿಮ್ಮಯ್ಯ, ಮೋಹಿನಿ, ಜೀತ್ಹೇಂದ್ರ, ಲತೇಶ್, ಅಜೇಯ್, ಸಚಿನ್ ಮೊದಲಾದ ಕಲಾವಿದರು ಪ್ರಶಸ್ತಿ ಸ್ವೀಕಾರ ಮಾಡಿದರು.