ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವೈದ್ಯಕೀಯ ವಿಭಾಗದ ಉಪಾಧ್ಯಕ್ಷನ್ನಾಗಿ ಕುಂಬಾರ ಸಮುದಾಯದ ಹಿರಿಯ ಹೃದ್ಯರೋಗ ತಜ್ಞ ಡಾ. ಶ್ರೀನಿವಾಸ್ ವೇಲು ಅವರನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ಸಲಹೆಯಂತೆ ಈ ನೇಮಕ ನಡೆದಿದೆ. ಮಲ್ಲಿಗೆ ಆಸ್ಪತ್ರೆಯ ಕಟ್ಟಡದಲ್ಲಿ ಕಾರ್ಡಿಯಾಲೊಜಿ ಸೆಂಟರ್ ನಡೆಸುತ್ತಿರುವ ಡಾ. ಶ್ರೀನಿವಾಸ್ ವೇಲು ಅವರು ಉತ್ತಮ ಸಂಘಟಕರಾಗಿದ್ದು, ಬೆಂಗಳೂರಿನ ಕುಂಭ ಕುಲಾಲ್ ಸಂಘ ಇದರ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.