ಕಿನ್ನಿಗೋಳಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಲ್ಲಿನ ಸಂಕಲಕರಿಯದ ನದಿಗೆ ಹಾರಿ ಪ್ರಯಾಣಿಕರ ಪ್ರಾಣ ಉಳಿಸಿದ ಗುಣಪಾಲ್ ಮೂಲ್ಯ ಮತ್ತು ಅಶೋಕ್ ಕುಲಾಲ್ ರವರಿಗೆ ಬೋಳ ಡೋನ್ ಬೋಸ್ಕೋ ಚರ್ಚ್ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಇಬ್ಬರನ್ನೂ ಬೋಳ ಡೋನ್ ಬೋಸ್ಕೋ ಚರ್ಚ್ ನ ಧರ್ಮಗುರುಗಳು ಅಭಿನಂದಿಸಿ ಗೌರವಿಸಸಿದರು. ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಗುಣಪಾಲ ಮೂಲ್ಯ ಅವರು ಪಟ್ಟೆಕ್ರಾಸ್ ನಿವಾಸಿ ಶಿವ ಮೂಲ್ಯ ಎಂಬವರ ಪುತ್ರರಾಗಿದ್ದು, ಅಂಗಡಿಯೊಂದನ್ನು ಹೊಂದಿದ್ದಾರೆ. ಅಶೋಕ್ ಕುಲಾಲ್ ಅವರು ಉಳೆಪಾಡಿಯ ಲಕ್ಷ್ಮಣ್ ಕುಲಾಲ್ ಅವರ ಪುತ್ರನಾಗಿದ್ದು, ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಇವರಿಬ್ಬರೂ ಬೊಲೆರೋ ವಾಹನ ಸಮೇತ ನದಿಗೆ ಬಿದ್ದಿದ್ದ ಬೋಳ ಕೇಂದೊಟ್ಟು ಬರ್ಕೆ ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್, ಮಕ್ಕಳಾದ ಶಲ್ಟನ್ ಮತ್ತು ಶರ್ಮನ್ ಅವರನ್ನು ರಕ್ಷಿಸಿದ್ದರು.