ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಯುವ ಚಿತ್ರ ಕಲಾವಿದೆ ಸ್ವಾತಿ ಕುಲಾಲ್ ಕಲ್ಲಮುಂಡ್ಕೂರು ಅವರನ್ನು `ವಿವೇಕ್ ಪುರಸ್ಕಾರ್-2019′ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜವನೆರ್ ಬೆದ್ರ ಯುವ ಸಂಘಟನೆ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆಯಲಿರುವ `ವಿವೇಕೋತ್ಸವ’ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಜವನೆರ್ ಬೆದ್ರ ಸಂಘಟನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ `ವಿವೇಕೋತ್ಸವ’ ಕಾರ್ಯಕ್ರಮವನ್ನು ಜನವರಿ 12ರಂದು ಮೂಡಬಿದ್ರೆ ಸಮಾಜಮಂದಿರದಲ್ಲಿ ಆಯೋಜಿಸಲಾಗಿದ್ದು, ಅಂದು ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್, ಸಹನಾ ಕುಂದರ್, ಅಮರ್ ಕೋಟೆ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸ್ವಾತಿ ಕುಲಾಲ್ ಸಹಿತ ಐವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಸ್ವಾತಿ ಅವರು ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರಿನ ಸೀತಾರಾಮ ಮೂಲ್ಯ ಮತ್ತು ಪದ್ಮಾವತಿ ದಂಪತಿಯ ಪುತ್ರಿ.
————————————————————————————————————————————————————————