ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸುಧಾರಕ ಸಂಘ (ರಿ) ಸಂಗಬೆಟ್ಟು, ಸಿದ್ದಕಟ್ಟೆ ಇದರ 14ನೇ ವರ್ಷದ ವಾರ್ಷಿಕ ಮಹಾಸಭೆಯು ಡಿ.2ರಂದು ಭಾನುವಾರ ಹೊಕ್ಕಾಡಿಗೋಳಿ ಕುಲಾಲ ಸಂಘದ ಕಟ್ಟಡದಲ್ಲಿ ಜರುಗಿತು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕ ಸಂಘಟನೆ ರಾಜಕೀಯವಾಗಿ ಕುಂಬಾರ ಸಮಾಜ ಇನ್ನಷ್ಟೂ ಬಲಿಷ್ಠವಾಗಿ ಬೆಳೆಯಬೇಕು ಎಂದರು.
ವೇದಿಕೆಯಲ್ಲಿ ಸಂಗಬೆಟ್ಟು ಕುಲಾಲ ಸುಧಾರಕ ಸಂಘದ ಸ್ಥಾಪಕ ಅಧ್ಯಕ್ಷ ಸೊಮಯ್ಯ ಮೂಲ್ಯ ಹಾಗೂ ಸಂಘದ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.