ಸಂಜೀವ ಕುಲಾಲ್ ಅವರು ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಗಡಿ ಭದ್ರತಾ ಪಡೆಯ ಹೊಸದಿಲ್ಲಿಯ 4ನೇ ಹೆಡ್ಕ್ವಾಟ್ರಸ್ನಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ಸಲ್ಲಿಸುತ್ತಿರುವವರು ಮೇರಿಹಿಲ್ ನಿವಾಸಿ ಸಂಜೀವ ಕುಲಾಲ್. ಹತ್ತೂಂಬನೇ ವಯಸ್ಸಿನಲ್ಲೇ ದೇಶಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಸಿಕೊಂಡು, 34 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಶ್ಮೀರ, ಕುಪ್ವಾರ, ಪಂಜಾಬ್, ರಾಜಸ್ತಾನ್ ಸೇರಿದಂತೆ ಉತ್ತರ ಭಾರತ ಹಾಗೂ ಈಶಾನ್ಯ ಭಾಗದಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ದೇಶರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಎಸ್ ಎಫ್ ಇನ್ಸ್ ಪೆಕ್ಟರ್ ಎಂ.ಸಂಜೀವ ಕುಲಾಲ್ ಅವರ ಸೇನಾ ಅನುಭವ (ವೀಡಿಯೋ)
video gallery
1 Min Read