ತುಮಕೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ತಿಪಟೂರು ಎಸ್ ಆರ್ ಎಸ್ ಕ್ರೋಮ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಭೈರೇಶ್ ಬಿ .ಎಸ್ ಅವರು ರಾಜ್ಯಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ 12ನೇ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ಆರು ನೂರು ಅಂಕದಲ್ಲಿ 587 ಪಡೆದು ಶೇಖಡಾ 98% ಗಳಿಸಿದ್ದಾರೆ. ಆ ಮೂಲಕ ಕಾಲೇಜಿಗೇ ಪ್ರಥಮ ಸ್ಥಾನಿಯಾಗಿದ್ದಲ್ಲದೆ ರಾಜ್ಯಕ್ಕೆ ಆರನೇ ರಾಂಕ್ ಗಳಿಸಿದ್ದಾರೆ. ಇವರು ಕುಂಬಾರ ಸಮುದಾಯದವರಾದ ತಿಪಟೂರು ಬಳುವನೇರಲು ನಿವಾಸಿ ಸತೀಶ. ಬಿ ಮತ್ತು ಪವಿತ್ರಾ .ಆರ್ ದಂಪತಿಯ ಸುಪುತ್ರ.
ಪಿಯೂಸಿ ಪರೀಕ್ಷೆಯಲ್ಲಿ ಭೈರೇಶ್ ಬಿ .ಎಸ್ ಗೆ ರಾಜ್ಯಕ್ಕೆ 12ನೇ ಸ್ಥಾನ
Banner
1 Min Read